ಕೇಂದ್ರ‌ ಬಜೆಟ್ 2024 | Union Budget 2024

ಹಲೋ ಸ್ನೇಹಿತರೇ ನಮಸ್ಕಾರ, ನಿಮೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, 2024 ರ ಕೇಂದ್ರ ಬಜೆಟ್‌ ಅನ್ನು ಇಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್‌ ಅವರು ಮಂಡಿಸಿದ್ದು, ಈ ಬಜೆಟ್‌ನಲ್ಲಿ ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಆದ್ಯತೆ ನೀಡಲಾಗಿದೆ, ಏನೆಲ್ಲಾ ಹೊಸ ಬದಲಾವಣೆ ತರಲಾಗಿದೆ. ಈ ಬಜೆಟ್‌ ನ ಎಲ್ಲಾ ಸಂಪೂರ್ಣ ಮುಖ್ಯಾಂಶಗಳನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Union Budget 2024
  • ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ 1.48 ಲಕ್ಷ ಕೋಟಿ ಮೀಸಲಿಟ್ಟಿದ್ದು, ಕೌಶಲ್ಯಾಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು.
  • ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ವರೆಗೂ ಶಿಕ್ಷಣ ಸಾಲ ನೀಡಲಾಗುವುದು.
  • ಐದು ವರ್ಷಗಳಲ್ಲಿ 20 ಲಕ್ಷ ಯುವಕರ ಕೌಶಲ್ಯಾಭಿವೃದ್ಧಿಗೆ ಗುರಿ. ಅಗತ್ಯ ನೆರವು. 
  • ಸಾವಿರ ಐಟಿಐಗಳ ಉನ್ನತೀಕರಣ, ಕೋರ್ಸ್ ಮರು ವಿನ್ಯಾಸ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ತರಬೇತಿ.
  • ಹೊಸ ಆದಾಯ ತೆರಿಗೆ ನೀತಿ ಆಯ್ಕೆ ಮಾಡಿಕೊಂಡವರಿಗೆ ಕೊಂಚ ರಿಲೀಫ್​.
  • ಸಣ್ಣ ಕೈಗಾರಿಕೆಗೆ 1.5 ಲಕ್ಷ ಬಡ್ಡಿರಹಿತ ಸಾಲ
  • ಇಂಡಸ್ಟ್ರಿಯಲ್‌ ಪಾರ್ಕ್‌ ಗಳ ಸ್ಥಾಪನೆ
  • 1 ಕೋಟಿ ಮನೆಗಳಿಗೆ 300 ಯುನಿಟ್‌ ಉಚಿತ ಸೊಲಾರ್ ವಿದ್ಯುತ್‌
  • ನಗರದ ಬಡವರಿಗೆ 1 ಕೋಟಿ ಮನೆ ನಿರ್ಮಾಣಕ್ಕೆ ಯೋಜನೆ
  • ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಭಾರ ಸ್ವಲ್ಪ ಕಡಿಮೆ 3 ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ
  • ಆದಾಯ ತೆರಿಗೆ ಮಿತಿ 2.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
  • ಮುದ್ರಾ ಯೋಜನೆಯಡಿ ಹೊಸ ಕೆಲಸ ಆರಂಭಿಸೋರಿಗೆ ಅಥವಾ ವ್ಯವಹಾರ ವಿಸ್ತರಣೆಗಾಗಿ 50 ಸಾವಿರದಿಂದ 10 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಇದೀಗ ಗರಿಷ್ಠ ಮೊತ್ತ 20 ಲಕ್ಷ ರೂ.ವರೆಗೆ ಏರಿಕೆ ಮಾಡಲಾಗಿದೆ.
  • ಮೊಬೈಲ್ ಫೋನ್, ಮೊಬೈಲ್ ಚಾರ್ಜರ್ ಬೆಲೆ ಇಳಿಕೆ
  • 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃದ್ದಿ ಯೋಜನೆ.
  • ಪಿಎಂ ಆವಾಸ್ ಯೋಜನೆʼಯಡಿ 3 ಕೋಟಿ ಮನೆಗಳ ನಿರ್ಮಾಣ ಗುರಿ
  • SC/ST/ಕುಶಲಕರ್ಮಿಗಳಿಗೆ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗುವುದು.
  • ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುವುದು.
  • ಮೂಲ ಸೌಕರ್ಯ ಅಭಿವೃದ್ದಿಗೆ 20 ಸಾವಿರ ಕೋಟಿ
ಆದಾಯ ಮಿತಿತೆರಿಗೆ
0.3 ಲಕ್ಷ00%
3-7 ಲಕ್ಷ05%
7-10 ಲಕ್ಷ10%
10-12 ಲಕ್ಷ15%
12-15 ಲಕ್ಷ20%
15 ಲಕ್ಷ ಮೇಲ್ಪಟ್ಟು30%

ಸೂಚನೆ: ಈ ಬಜೆಟ್‌ ನ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಪಿಡಿಎಫ್‌ ಮೇಲ್‌ ಕ್ಲಿಕ್‌ ಮಾಡಿ ಬಜೆಟ್‌ ಪ್ರತಿಯನ್ನು ಓದಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಬಜೆಟ್‌ ಸಂಪೂರ್ಣ ಮಾಹಿತಿ PDF‌Click Here / Click Here

Leave a Reply

Join WhatsApp Group