ಯುವ ಸಬಲೀಕರಣ ಇಲಾಖೆ ವಿದ್ಯಾರ್ಥಿ ವೇತನ | Youth Empowerment Department Scholarship 2024

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು. ಈ ವಿದ್ಯಾರ್ಥಿವೇತನಕ್ಕೆ ಅರ್ಹತೆಗಳು, ದಾಖಲೆಗಳು ಇದೆಲ್ಲದರ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

Youth Empowerment Department Scholarship 2024

2023-24 ನೇ ಸಾಲಿಗೆ ಯುವ ಸಬಲೀಕರಣ ಇಲಾಖೆ ವತಿಯಿಂದ ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆ ಅಡಿ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (6ನೇ ತರಗತಿಯಿಂದ 10ನೇ ತರಗತಿಯವರೆಗೆ) ವಾರ್ಷಿಕ ರೂ. 10,000 ಗಳಂತೆ ಕ್ರೀಡಾ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇಲಾಖೆಯಲ್ಲಿ ಜಾರಿಯಲ್ಲಿದ್ದು, ಈ ಯೋಜನೆಯನ್ವಯ ಪ್ರಸ್ತುತ ಮಾಧ್ಯಮಿಕ, ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.

  • 2023-24ನೇ ಸಾಲಿನಲ್ಲಿ ಪ್ರಸ್ತುತ ದಿನಗಳಲ್ಲಿ 6 ರಿಂದ 10ನೇ ತರಗತಿ ಶಿಕ್ಷಣವನ್ನು ಪಡೆಯುತ್ತಿರಬೇಕು.
  • ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿರಬೇಕಾಗುತ್ತದೆ.
  • ಈ ಎರಡು ರೀತಿಯ ಅರ್ಹತೆ ಹೊಂದಿದಂತಹ ವಿದ್ಯಾರ್ಥಿಗಳಿಗೆ 10,000 ಹಣವು ಕೂಡ ಕ್ರೀಡಾಕೂಟದಿಂದ ದೊರೆಯಲಿದೆ.
  • ಕ್ರೀಡಾ ಸಾಧನೆಯ ಪ್ರಮಾಣಪತ್ರಗಳು
  • ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿ/ರದ್ದಾದ ಚೆಕ್
  • ಅಧ್ಯಯನ ಪ್ರಮಾಣಪತ್ರ
  • ಅರ್ಜಿ ಶುಲ್ಕ: ಇರುವುದಿಲ್ಲ
  • ಸೇವಾ ಶುಲ್ಕ (ಗ್ರಾಮ ಒನ್| ಬಿ1| ಕೆ1) : ₹40
  • ಸೇವಾ ಸಮಯ (ದಿನಗಳು) : ಇರುವುದಿಲ್ಲ

₹10,000/- ವಿದ್ಯಾರ್ಥಿವೇತನ

30-06-2024

  • ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹ ಕ್ರೀಡಾಪಟುಗಳು ಇಲಾಖೆಯ ಅಧಿಕೃತ ಜಾಲತಾಣ https://sevasindhuservices.karnataka.gov.in/ ಮೂಲಕ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು.
  • ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಗೇಟ್‌ ನಂ.12, ಕೊಠಡಿ ಸಂಖ್ಯೆ 17-18, ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಬೆಂಗಳೂರು-560001, ದೂರವಾಣಿ ಸಂಖ್ಯೆ-080-22239771 ಮೂಲಕ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಕ್ರೀಡಾ ವಿದ್ಯಾರ್ಥಿವೇತನ ಅಪ್ಲೇ ಆನ್ಲೈನ್‌Click Here

Leave a Reply

Join WhatsApp Group