ಬೆಳೆ ವಿಮೆ ಯೋಜನೆ 2024 | Crop Insurance Scheme 2024

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ರಾಜ್ಯಾಂದ್ಯಂತ ಬೆಳೆ ಸಾಲ ಮತ್ತು ಬೆಳೆ ವಿಮೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರೈತರಿಗೆ ಒದಗಿಸಿಕೊಡಲಾಗುತ್ತಿದೆ. ಎಲ್ಲಾ ಜಿಲ್ಲೆಯ ರೈತರು ಕೂಡ ಬಿಳೆ ವಿಮೆ ಹಣ ಪಡೆಯಲು ಹಾಗೂ ಬೆಳೆ ಸಾಲ ಪಡೆಯುವವರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಮಾಡಿಸಿಕೊಳ್ಳುವುದು ಹೇಗೆ, ಅಗತ್ಯ ದಾಖಲೆಗಳು, ಕೊನೆಯ ದಿನಾಂಕ ಯಾವಾಗ ಇದೆಲ್ಲದರ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ. ಕೊನೆಯವರೆಗೂ ಓದಿ ಈ ಯೋಜನೆಯ ಲಾಭ ಪಡೆಯಿರಿ.

Crop Insurance Scheme 2024

ಫಸಲು ಕೊಡುತ್ತಿರುವ ಆಡಿಕೆ, ಮಾವು, ಶುಂಠಿ ಹಾಗೂ ಕಾಳುಮೆಣಸು ಬೆಳೆಗಳನ್ನು ಬೆಳೆದಿರುವ ಎಲ್ಲಾ ರೈತರು.
ಈ ಮೇಲಿನ ಬೆಳೆಗಳಿಗೆ ಬೆಳೆಸಾಲ ಪಡೆದಿರುವ / ಪಡೆಯುವ ಹಾಗೂ ಬೆಳೆಸಾಲ ಪಡೆಯದ ಎಲ್ಲಾ ರೈತರುಗಳ ವಿಮೆಗೆ ನೊಂದಾಯಿಸಿಕೊಳ್ಳಬಹುದಾಗಿರುತ್ತದೆ.

ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆ ಯೋಜನೆಗಳಲ್ಲಿ ಕಡ್ಡಾಯವಾಗಿ ಒಳಪಡುತ್ತಾರೆ. ಆದರೆ, ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದಿದ್ದಲ್ಲಿ ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರಿಗೆ ಬೆಳೆ ವಿಮೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿವಸಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಚಳಿಕೆ ಪತ್ರವನ್ನು ನೀಡಿದ್ದಲ್ಲಿ, ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು.

  • ರೈತರು ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ,
  • ಬ್ಯಾಂಕ್ ಖಾತೆಯ ಪಾಸ್ ಪುಸ್ತಕ,
  • ಆಧಾರ್ ಕಾರ್ಡ್
  • ಸ್ವಯಂ ಘೋಷಿತ ಬೆಳೆ ವಿವರ
  • ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಿಮಾ ನಷ್ಟ ಪರಿಹಾರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರವು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಾಪಿಸಿರುವ ಮಳೆ ಮಾಪನ ಹಾಗೂ ಹವಾಮಾನ ಕೇಂದ್ರಗಳಲ್ಲಿ ದಾಖಲಾದ ಮಾಹಿತಿಯನ್ನಾಧರಿಸಿ ಅಂದಾಜಿಸಲಾಗುವುದು.
  • ಪರಿಹಾರದ ಮೊತ್ತವನ್ನು ನೀಡಲು ಅಧಿಸೂಚಿಸಲಾದ Term sheet, Pay out structure, Duration, Index (ಉದಾ: ಕಡಿಮೆ ಮಳೆ. ಅಧಿಕ ಮಳೆ-ಅಧಿಕ ಆದ್ರ್ರತೆ, ಅಧಿಕ ಮಳೆ, ಸತತ ನಾಲ್ಕು ದಿನಗಳಿಂದ ಅಧಿಕ ಮಳೆಯಿಂದಾಗಿ ಬೆಳೆಗಳಿಗೆ ಆಗುವ ಪ್ರತಿಕೂಲ ಪರಿಣಾಮಗಳು) ಗಳನ್ನಾಧರಿಸಿ ಅಂದಾಜಿಸಲಾಗುವುದು.
  • ಅಧಿಸೂಚಿತ ಘಟಕದಲ್ಲಿ (ಗ್ರಾಮ ಪಂಚಾಯತ್) ವಿಮೆಗೆ ಒಳಪಟ್ಟ ಎಲ್ಲಾ ರೈತರಿಗೂ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.

ಅಧಿಸೂಚಿಸಲಾದ ಬೆಳೆಗಳಿಗೆ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ. ಭೂಕುಸಿತ ಮತ್ತು ಬೆಳೆ ಮುಳುಗಡೆ ಸಂದರ್ಭಗಳಲ್ಲಿ ಬೆಳೆ ನಷ್ಟವುಂಟಾದರೆ ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸಲು ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆ ಕಚೇರಿಗಳಿಗೆ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ತಿಳಿಸತಕ್ಕದ್ದು.

crop loan

ಬ್ಯಾಂಕುಗಳಿಗೆ / ಸಮೀಪದ ಸಾರ್ವಜನಿಕ ಸೇವಾ ಕೇಂದ್ರ (Common Service Centres) / ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ, ನೊಂದಾಯಿಸಿಕೊಳ್ಳುವುದು.

31-07-2024

ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಧಿಕೃತ ವೆಬ್ಸೈಟ್‌Click Here

Leave a Reply

Join WhatsApp Group