ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಸ್ವತಃ ಸ್ವ ಉದ್ಯೋಗ ಪ್ರಾರಂಭಿಸಿ ಹೆಚ್ಚು ಆದಾಯ ಗಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕನಸು ಬಹುತೇಕ ಆಸೆ ಯುವಕರದ್ದಾಗಿರುತ್ತದೆ. ಈ ಕನಸಿಗೆ ನೆರವಾಗಲು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮೊಬೈಲ್ ಕ್ಯಾಂಟಿನ್ ಸಬ್ಸಿಡಿ ಯೋಜನೆ ಜಾರಿಗೆ ತಂದಿದೆ. ಅತಿ ಕಡಿಮೆ ಬಂಡವಾಳದೊಂದಿಗೆ ಹೆಚ್ಚು ಲಾಭ ನೀಡಬಲ್ಲ ಈ ಯೋಜನೆ ಗ್ರಾಮೀಣ ಮತ್ತು ನಗರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯುವಕರಿಗೆ ಸುವರ್ಣಾವಕಾಶವಾಗಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.

ಆಹಾರ ಪದಾರ್ಥಗಳ ಮಾರಾಟಕ್ಕೆ ಪೂರಕ ಬ್ಯುಸಿನೆಸ್ ಗಳಲ್ಲಿ ವರ್ಷ ಪೂರ್ತಿ ಬೇಡಿಕೆ ಇದ್ದೇ ಇರುತ್ತದೆ ಅದರಲ್ಲೂ ಇತ್ತಿಚೇಗೆ ಮೊಬೈಲ್ ಕ್ಯಾಂಟಿನ್ ವ್ಯವಹಾರದಲ್ಲಿ(Mobile Canteen Subsidy Yojana) ಕಡಿಮೆ ಬಂಡವಾಳವನ್ನು ಹೂಡಿಕೆ ಮಾಡಿ ಹೆಚ್ಚು ಆದಾಯವನ್ನು ಪಡೆಯಲು ಉತ್ತಮ ಅವಕಾಶಗಳಿವೆ. ಬಹಳಷ್ಟು ಮಂದಿಗೆ ಆರಂಭಿಕ ಹೂಡಿಕೆಗೆ ಹಣದ ಕೊರತೆಯೇ ದೊಡ್ಡ ಸಮಸ್ಯೆಯಾಗಿರುತ್ತದೆ. ಇದನ್ನು ಮನಗಂಡು ಪ್ರವಾಸೋದ್ಯಮ ಇಲಾಖೆ ಈ ಯೋಜನೆ ಮೂಲಕ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಗರಿಷ್ಠ 5 ಲಕ್ಷ ರೂ.ವರೆಗೆ ಸಹಾಯಧನ ನೀಡಲು ಮುಂದಾಗಿದೆ.
ಸಹಾಯಧನ:
ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಮೊಬೈಲ್ ಕ್ಯಾಂಟಿನ್ ಅನ್ನು ಆರಂಭಿಸಲು ಒಟ್ಟು ಘಟಕ ವೆಚ್ಚಕ್ಕೆ ಶೇ 70 ರಷ್ಟು ಗರಿಷ್ಥ 5 ಲಕ್ಷದ ವರೆಗೆ ಸಹಾಯಧನವನ್ನು ಒದಗಿಸಲಾಗುತ್ತದೆ.
ಯೋಜನೆಯ ಮಹತ್ವ:
- ಪರಿಶಿಷ್ಟ ಜಾತಿ (SC) ಹಾಗೂ ಪರಿಶಿಷ್ಟ ಪಂಗಡ (ST) ಯುವಕರಿಗೆ ಉದ್ಯಮ ಅವಕಾಶ ಕಲ್ಪಿಸುವುದು
- ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳಿಸುವುದು.
- ರಾಜ್ಯದ ಪ್ರವಾಸೋದ್ಯಮ ನೀತಿ 2020-25ಗೆ ಅನುಗುಣವಾಗಿ ಆತಿಥ್ಯ ಕ್ಷೇತ್ರದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಉತ್ತೇಜಿಸುವುದು.
- ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಾವಲಂಬಿ ಉದ್ಯಮಿಗಳ ಸಂಖ್ಯೆಯನ್ನು ಹೆಚ್ಚಿಸುವುದು.
ಅರ್ಹತೆಗಳು:
- ಕರ್ನಾಟಕದ ಮೂಲ ನಿವಾಸಿಯಾಗಿರಬೇಕು.
- ಅಭ್ಯರ್ಥಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
- ಕನಿಷ್ಠ SSLC ಪಾಸಾಗಿರಬೇಕು.
- ವಯಸ್ಸು ಕನಿಷ್ಠ 20 ರಿಂದ ಗರಿಷ್ಠ 45 ವರ್ಷವರೆಗೆ ಇರಬೇಕು.
- ಲಘು ವಾಹನ ಚಾಲನಾ ಪರವಾನಗಿ (LMV) ಹೊಂದಿರಬೇಕು.
- ವಾರ್ಷಿಕ ಆದಾಯ ನಗರ ಪ್ರದೇಶದವರಿಗೆ ₹2 ಲಕ್ಷ, ಗ್ರಾಮೀಣ ಪ್ರದೇಶದವರಿಗೆ ₹1.5 ಲಕ್ಷ ಮಿತಿಯಲ್ಲಿ ಇರಬೇಕು.
- ಅರ್ಜಿದಾರ ಅಥವಾ ಅವರ ಕುಟುಂಬದ ಸದಸ್ಯರು ಸರ್ಕಾರಿ ನೌಕರರಾಗಿರಬಾರದು.
ದಾಖಲೆಗಳು:
- ಅರ್ಜಿಯ ನಮೂನೆ: ಸ್ಥಳೀಯ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಲಭ್ಯ.
- ಆಧಾರ್ ಕಾರ್ಡ್
- 2 ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- SSLC ಅಂಕಪಟ್ಟಿ
- ಲಘು ವಾಹನ ಚಾಲನಾ ಪರವಾನಗಿ ನಕಲು
ತರಬೇತಿಗೆ ಸಹಾಯ:
ಈ ಯೋಜನೆಯ ದೊಡ್ಡ ವಿಶೇಷತೆಯೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಖಾಲಿ ಹಣ ನೀಡುವುದಲ್ಲದೆ, ಒಂದು ತಿಂಗಳ ಉಚಿತ ಉದ್ಯಮಶೀಲತೆ ತರಬೇತಿಯನ್ನು ಸಹ ಒದಗಿಸಲಾಗುತ್ತದೆ. ಈ ತರಬೇತಿ ಪ್ರಥಮ ಉದ್ದಿಮೆ ಆರಂಭಿಸುವವರಿಗಾಗಿ ಬಹಳ ಸಹಾಯಕವಾಗಿದ್ದು, ಉದ್ಯಮ ನಿರ್ವಹಣೆ, ಆಹಾರ ಸುರಕ್ಷತೆ, ಗ್ರಾಹಕರ ನಿರ್ವಹಣೆ, ವಾಹನ ನಿರ್ವಹಣೆ ಹೀಗೆ ವಿವಿಧ ವಿಷಯಗಳನ್ನು ಒಳಗೊಂಡಿರುತ್ತದೆ.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಮೇಲೆ ತಿಳಿಸಿರುವ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಗನ್ನು ನಿಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.
ಸಂಪರ್ಕ ವಿವರಗಳು:
- ಕರ್ನಾಟಕ ಪ್ರವಾಸೋದ್ಯಮ ಇಲಾಖೆ
- ಸಹಾಯಕ ನಿರ್ದೇಶಕರ ಕಚೇರಿ,
- ರಂಗಾಯಣ ಆವರಣ, ಬೆಂಗಳೂರು.
- ದೂರವಾಣಿ ಸಂಖ್ಯೆ: 0836-2955522
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಮಾಹಿತಿ:
- ಕೋಟಕ್ ಕನ್ಯಾ ವಿದ್ಯಾರ್ಥಿವೇತನ | Kotak Kanya Scholarship 2025
- ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೇಮಕಾತಿ | UIDAI Recruitment 2025
- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ | NHAI Recruitment 2025
- ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ನೇಮಕಾತಿ | NIMHANS Recruitment 2025
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ | BOB Recruitment 2025