ಅಂಗನವಾಡಿ ನೇಮಕಾತಿ | Anganwadi Recruitment 2024

ಹಲೋ ಸ್ನೇಹಿತರೇ, ಇಂದಿನ ಉದ್ಯೋಗ ಮಾಹಿತಿಗೆ ಎಲ್ಲರಿಗೂ ಸ್ವಾಗತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತುಮಕೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯವಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅರ್ಹ ಮಹಿಳಾ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿಸಲ್ಲಿಸಿ.

Anganwadi Recruitment tumkur

ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ

ಒಟ್ಟು ಹುದ್ದೆಗಳು: 384

ಕರ್ನಾಟಕ ಸರ್ಕಾರಿ ಹುದ್ದೆಗಳುClick Here
ಕೇಂದ್ರ ಸರ್ಕಾರಿ ಹುದ್ದೆಗಳುClick Here
ಸರ್ಕಾರಿ ಹುದ್ದೆಗಳುClick Here
ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಅಂಗನವಾಡಿ ಕಾರ್ಯಕರ್ತೆಯರು106
ಅಂಗನವಾಡಿ ಸಹಾಯಕಿಯರು278
  • ಅಂಗನವಾಡಿ ಕಾರ್ಯಕರ್ತೆ: ಕನಿಷ್ಠ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು. SSLC ಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು.
  • ಅಂಗನವಾಡಿ ಸಹಾಯಕಿ: SSLC ಅಥವಾ ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

PWD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ

ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಶುಲ್ಕ ಇರುವುದಿಲ್ಲ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ ವೇತನವನ್ನು ನೀಡಲಾಗುತ್ತದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದ ಅಂಕ ಮತ್ತು ಬೋನಸ್ ಅಂಕಗಳನ್ನು ಒಳಗೊಂಡಂತೆ ಪಡೆದ ಒಟ್ಟು ಅಂಕಗಳನ್ನು ಕ್ರೂಡೀಕರಿಸಿ ಪಟ್ಟಿಯನ್ನು ಸಿದ್ಧಪಡಿಸಿ ಅರ್ಹತೆ ಮತ್ತು ಮೆರಿಟ್‌ಗೆ ಅನುಗುಣವಾಗಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

  • ಅಧಿಕೃತ ವೆಬ್‌ಸೈಟ್ @ karnemakaone.kar.nic.in/abcd/ ಗೆ ಭೇಟಿ ನೀಡಿ
  • ನೀವು ಅರ್ಜಿ ಸಲ್ಲಿಸಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
  • ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಉದ್ಯೋಗಗಳ ಅಧಿಸೂಚನೆಯನ್ನು ತೆರೆಯಿರಿ ಮತ್ತು ಅರ್ಹತೆಯನ್ನು ಪರಿಶೀಲಿಸಿ.
  • ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
  • ನೀವು ಅರ್ಹರಾಗಿದ್ದರೆ, ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
  • ಕೊನೆಯ ದಿನಾಂಕದ ಮೊದಲು ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು ಅರ್ಜಿ ನಮೂನೆಯ ಸಂಖ್ಯೆ/ಸ್ವೀಕಾರ ಸಂಖ್ಯೆಯನ್ನು ಸುರಕ್ಷಿತವಾಗಿಡಿ.

ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕೃತ ವೆಬ್‌ಸೈಟ್ karnemakaone.kar.nic.in/abcd/ ನಲ್ಲಿ 10-01-2024 ರಿಂದ 05-02-2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ತುಮಕೂರು, ಕರ್ನಾಟಕ

  • ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ: 10/01/2024
  • ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು ಕೊನೆಯ ದಿನಾಂಕ: 05/02/2024
ಉದ್ಯೋಗ ದೀಪ ಅಪ್ಲಿಕೇಶನ್Download App
ವಾಟ್ಸಾಪ್‌ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿClick Here
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್‌ ಮಾಡಿ
ಅಪ್ಲೈ ಆನ್ಲೈನ್Click Here
ಅಧಿಕೃತ ಅಧಿಸೂಚನೆ‌‌Click Here
ಅಧಿಕೃತ ವೆಬ್‌ಸೈಟ್Click Here

Leave a Reply

Join WhatsApp Group