ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕ ಸರ್ಕಾರವು ಈಗಾಗಲೇ ಜನಸಾಮಾನ್ಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕರ್ನಾಟಕ ಕಲ್ಯಾಣ ಯೋಜನೆಗಳೆಂದು 6 ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಗಳಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಈ ಯೋಜನೆಗಳ ಲಾಭ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಕರ್ನಾಟಕ ಕಲ್ಯಾಣ ಯೋಜನೆಗಳು:
- ಗಂಗಾ ಕಲ್ಯಾಣ ಯೋಜನೆ
- ಭೂ ಒಡೆತನ ಯೋಜನೆ
- ಮೈಕ್ರೋ ಕ್ರೆಡಿಟ್ (ಪ್ರೆರಣಾ) ಯೋಜನೆ
- ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
- ಉದ್ಯಮ ಶೀಲತೆ ಅಭಿವೃದ್ಧಿ ಯೋಜನೆ
- ಸ್ವಾವಲಂಬಿ ಸಾರಥಿ ಯೋಜನೆ
1. ಗಂಗಾ ಕಲ್ಯಾಣ ಯೋಜನೆ:
- 1.20 ಎಕರೆಯಿಂದ 5 ಎಕರೆ ಜಮಿನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೊಳವೆಬಾವಿಕೊರೆದು ಪಂಪ್ ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಿಕೊಡಲಾಗುವುದು.
- ಘಟಕ ವೆಚ್ಚ: ₹4.75 ಲಕ್ಷ / ₹3.75 ಲಕ್ಷ- ಇದರಲ್ಲಿ ₹50,000 ಸಾಲವೂ ಸೇರಿರುತ್ತದೆ.
2. ಭೂ ಒಡೆತನ ಯೋಜನೆ:
- ಭೂ ರಹಿತ ಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕೆಳಕಂಡ ಘಟಕ ವೆಚ್ಚದಲ್ಲಿ ಕೃಷಿ ಜಮಿನು ಖರೀದಿಸಿ ನೀಡಲಾಗುವುದು.
- ಘಟಕ ವೆಚ್ಚ: ₹25 ಲಕ್ಷ / ₹20 ಲಕ್ಷ
- ಸಹಾಯಧನ: ಶೇ.50
- ಸಾಲ: ಶೇ.50 (ಶೇ.6 ರಷ್ಟು ಬಡ್ಡಿದರ)
3. ಮೈಕ್ರೋ ಕ್ರೆಡಿಟ್ (ಪ್ರೆರಣಾ) ಯೋಜನೆ:
- ಮಹಿಳಾ ಸ್ವಸಹಾಯ ಸಂಘಗಳಿಗೆ (ಕನಿಷ್ಠ 10 ಸದಸ್ಯರು) ಕಿರು ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲಾಗುವುದು.
- ಘಟಕ ವೆಚ್ಚ: ₹2.50 ಲಕ್ಷ
- ಸಹಾಯಧನ: ₹1.50 ಲಕ್ಷ
- ಸಾಲ: ₹1ಲಕ್ಷ (ಶೇ.4 ರಷ್ಟು ಬಡ್ಡಿದರ)
4. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:
- ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಹಾಗೂ ಸಾಲ ಮಂಜೂರು ಮಾಡಲಾಗುತ್ತದೆ.
- ಘಟಕ ವೆಚ್ಚ: ₹1 ಲಕ್ಷ
- ಸಹಾಯಧನ: ₹50,000
- ಸಾಲ: ₹50,000 (ಶೇ.4 ರಷ್ಟು ಬಡ್ಡಿದರ)
5. ಉದ್ಯಮ ಶೀಲತೆ ಅಭಿವೃದ್ಧಿ ಯೋಜನೆ:
ಉದ್ದೇಶಗಳು:
- ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಈ ಕೆಳಕಂಡಂತೆ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.
- ಬ್ಯಾಂಕ್ ಸಾಲದ ಶೇ.20 ರಷ್ಟು ಸಹಾಯಧನ ಅಥವಾ ಗರಿಷ್ಠ ₹1ಲಕ್ಷ
- ಘಟಕ ವೆಚ್ಚ ಶೇ.70 ರಷ್ಟು ಸಹಾಯಧನ ಅಥವಾ ಗರಿಷ್ಠ ₹2ಲಕ್ಷ
6. ಸ್ವಾವಲಂಬಿ ಸಾರಥಿ ಯೋಜನೆ:
ಸರಕು ವಾಹನ/ ಟ್ಯಾಕ್ಸಿ ( ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ ಸಾಲದ ಮೊತ್ತದೆ ಶೇ.75 ರಷ್ಟು ಸಾಹಯಧನ ಅಥವಾ ಗರಿಷ್ಠ ₹4 ಲಕ್ಷ
ಈ 6 ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅಕ್ಟೋಬರ್ 10ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482300400 ಸಂಪರ್ಕಿಸಬಹುದು.
ಕೊನೆಯ ದಿನಾಂಕ: 10-10-2024
ಸೂಚನೆ: ಈ ಯೋಜನೆಗಳಿಗೆ ಪರಿಶಿಷ್ಟ ಜಾತಿಯವರು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್ಗಳು:
ಉದ್ಯೋಗ ದೀಪ ಅಪ್ಲಿಕೇಶನ್ | Download App |
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಇತರೆ ಹುದ್ದೆಗಳ ಮಾಹಿತಿಗಾಗಿ | Click Here |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ | Click Here |
ಇತರೆ ಮಾಹಿತಿ:
- ಉದ್ಯೋಗಿನಿ ಯೋಜನೆ ಅರ್ಜಿ ಪ್ರಾರಂಭ | Udyogini Scheme Application Start 2024
- ಗೃಹ ಆರೋಗ್ಯ ಯೋಜನೆ | Gruha Arogya Scheme 2024
- ಸ್ವಾವಲಂಬಿ ಸಾರಥಿ ಯೋಜನೆ ಅರ್ಜಿ ಪ್ರಾರಂಭ | Swavalambi Sarathi Yojana Application Start 2024
- ಉಚಿತ ಹೊಲಿಗೆ ಯಂತ್ರ ಯೋಜನೆ ಅರ್ಜಿ ಆರಂಭ | Free Sewing Machine Scheme Application Start 2024